ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮಾಡಿರುವ ಆರೋಪದ ಸ್ವರೂಪ ಬೇರೆ ಕಡೆ ಸಾಗುತ್ತಿದೆ. ಇದು ರಾಜಕೀಯ ಪ್ರೇರಿತ ಇರಬಹುದು ಎಂದು ಕೆಲವರು, ಇದು ಚೇತನ್ ಸೇಡು ಎಂದು ಮತ್ತೆ ಕೆಲವರು, ಇನ್ನು ಕೆಲವರು ಶ್ರುತಿಗೆ ಧ್ರುವ ಸರ್ಜಾ ಸಿನಿಮಾ ಸಿಕ್ಕಿಲ್ಲ ಎಂಬ ಕಾರಣಕ್ಕೆ ಎಂದು ಮಾತನಾಡುತ್ತಿದ್ದಾರೆ. ಪ್ರಮುಖವಾಗಿ ಆರು ಅಂಶಗಳನ್ನ ಮುಂದಿಟ್ಟಿರುವ ಶ್ರುತಿ, ಕನ್ನಡ ಚಿತ್ರರಂಗದ ಹಿರಿಯರು ಎನಿಸಿಕೊಂಡಿರುವ ಕೆಲವು ವ್ಯಕ್ತಿಗಳನ್ನ ಪ್ರಶ್ನಿಸಿದ್ದಾರೆ.